K S C C S F




Lab Flox

ಕಿರುಪರಿಚಯ

ಸ್ಥಾಪನೆ:- ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳವು ಕೃಷಿಯೇತರ ಪತ್ತಿನ ಸಹಕಾರ ಸಂಘಗಳ ಅಭಿವೃದ್ದಿಗಾಗಿ, ಇತರೆ ಮಹಾಮಂಡಳಗಳಂತೆ ಒಂದು ಪ್ರತ್ಯೇಕ ಮಹಾಮಂಡಳವನ್ನು ಸ್ಥಾಪಿಸಲು 1996ರಲ್ಲಿ ಸಹಕಾರಿ ಧುರೀಣರು ಚಿಂತನೆ ಮಾಡಿದರು. ಅಂತಿಮವಾಗಿ ಶ್ರೀ ಬಿ.ಎಲ್.ಲಕ್ಕೇಗೌಡ ಮುಖ್ಯಪ್ರವರ್ತಕರು ಹಾಗೂ 12 ಪ್ರವರ್ತಕರು ಸೇರಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿ, ಪತ್ತಿನ ಸಂಘಗಳ ನಿಬಂಧಕರು ದಿನಾಂಕ:06.11.2004ರಂದು ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳವನ್ನು ನೋಂದಣಿ ಮಾಡಿದರು. ಅಂದಿನಿಂದ ಈ ಮಹಾಮಂಡಳವು ಜಯನಗರ, 3ನೇ ವಿಭಾಗ, ಬೆಂಗಳೂರು ಇಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಸಂಸ್ಥೆಯ ವ್ಯವಹಾರವು ಅಭಿವೃದ್ದಿ ಹೊಂದಿದ್ದು, ನೌಕರರು ಹಾಗೂ ಆಡಳಿತಮಂಡಳಿತ ಕಾರ್ಯಕಲಾಪಗಳಿಗೆ ಸ್ಥಳದ ಕೊರತೆಯಿದ್ದ ಕಾರಣ ಕಾರ್ಯಾಲಯವನ್ನು ಮಲ್ಲೇಶ್ವರಂಗೆ ಸ್ಥಳಾಂತರಿಸಲಾಯಿತು. ಹಾಲಿ ನಂ.126, 1ನೇ ಮುಖ್ಯರಸ್ತೆ, ರಾಜೀವ ಗಾಂಧಿನಗರ,ನಂದಿನಿ ಲೇಔಟ್, ಬೆಂಗಳೂರು-560096 ಇಲ್ಲಿ ಸ್ವಂತ ಕಟ್ಟಡವನ್ನು ನಿರ್ಮಿಸಿ ಕಾರ್ಯನಿರ್ವಹಿಸುತ್ತಿದೆ.

ಮಹಾಮಂಡಳದ ನೋಂದಣಿ ಸಂಖ್ಯೆ ಮತ್ತು ದಿನಾಂಕ

ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳವು. ಸಹಕಾರ ಸಂಘಗಳ ನಿಬಂಧಕರು. ಕರ್ನಾಟಕ ರಾಜ್ಯ, ಬೆಂಗಳೂರು ಇವರಿಂದದಿನಾಂಕ:06-11-2004ರಂದು ನೋಂದಣಿಯಾಗಿದ್ದು. ನೋಂದಣಿ ಸಂಖ್ಯೆ:ಯುಬಿಸಿ-3/98/ನೋಂದಣಿ/34547/2004-05 ಆಗಿರುತ್ತದೆ.


ಮಹಾಮಂಡಳದ ಕಾರ್ಯಕ್ಷೇತ್ರ:

ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳದ ಕಾರ್ಯಕ್ಷೇತ್ರವು ಕರ್ನಾಟಕ ರಾಜ್ಯದ ಎಲ್ಲಾ ಪ್ರದೇಶಗಳಿಗೆ ಸೀಮಿತವಾಗಿರುತ್ತದೆ. ಮಹಾಮಂಡಳವು ನಂ.126, 1ನೇ ಮುಖ್ಯರಸ್ತೆ, ರಾಜೀವ ಗಾಂಧಿನಗರ, ನಂದಿನಿ ಲೇಔಟ್, ಬೆಂಗಳೂರು-560096 ಇಲ್ಲಿ ಕಾರ್ಯನಿರ್ವಹಿಸುತ್ತಿದೆ.

20 Years in Banking

ಉದ್ದೇಶ:-

ಪತ್ತಿನ ಸಹಕಾರ ಸಂಘಗಳ ಕಾರ್ಯಚಟುವಟಿಕೆಗಳನ್ನು ಪ್ರೋತ್ಸಾಹಿಸುವ ಹಾಗೂ ಆ ಸಂಘಗಳ ಪದಾಧಿಕಾರಿಗಳ, ನಿರ್ದೇಶಕರ ಮತ್ತು ನೌಕರ ವರ್ಗದವರಿಗೆ, ಸಹಕಾರ ಕಾಯ್ದೆ, ನಿಯಮಗಳು ಕುರಿತಂತೆ ತರಬೇತಿ ಕಾರ್ಯಕ್ರಮಗಳನ್ನು ನೀಡುವುದಲ್ಲದೇ, ತನ್ನ ಸದಸ್ಯರಿಗೆ ಅಗತ್ಯವಿರುವ ಬ್ಯಾಂಕಿಂಗ್ ವ್ಯವಹಾರ ಠೇವಣಿ ಮತ್ತು ಉಳಿತಾಯ ಖಾತೆಗಳನ್ನು ನಿರ್ವಹಿಸುವ ಸಂಘಗಳಿಗೆ ಈ ಮಹಾಮಂಡಳವು ಸೂಕ್ತ ಮಾಹಿತಿ ಒದಗಿಸುತ್ತಿದೆ. ಒಟ್ಟಿನಲ್ಲಿ, ಪತ್ತಿನ ಸಹಕಾರ ಸಂಘಗಳ ಅಭಿವೃದ್ದಿ ಮಹಾಮಂಡಳದ ಪ್ರಮುಖ ಉದ್ದೇವಾಗಿರುತ್ತದೆ

ಸದಸ್ಯತ್ವ:-

ಮಹಾಮಂಡಳದ ಉಪನಿಯಮದ ರೀತ್ಯ ಪ್ರಾಥಮಿಕ ಕೃಷಿಯೇತರ ಪತ್ತಿನ ಸಹಕಾರ ಸಂಘಗಳು, ನೌಕರರ ಪತ್ತಿನ ಸಹಕಾರ ಸಂಘಗಳು/ಮಹಿಳಾ ಪತ್ತಿನ ಸಹಕಾರ ಸಂಘಗಳು ಮತ್ತು ಇತರೆ ಸಹಕಾರ ಸಂಘಗಳು ಮಹಾಮಂಡಳದಲ್ಲಿ ಆಜೀವ ಸದಸ್ಯತ್ವ/ ಅಜೀವ ಸಹಸದಸ್ಯ/ ಅಜೀವ ನಾಮಮಾತ್ರ ಸದಸ್ಯತ್ವ ಪಡೆದುಕೊಳ್ಳಲು ಅವಕಾಶವಿದೆ.

Lab Flox

ಇ-ಸ್ಟಾಂಪಿಂಗ್ ವ್ಯವಹಾರ:- ಸದಸ್ಯ ಸಂಘಗಳಿಗೆ ಬಡ್ಡಿಯೇತರ ಆದಾಯವನ್ನು ಕಲ್ಪಿಸಿಕೊಡುವ ಸಲುವಾಗಿ, ಮಹಾಮಂಡಳವು ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಜೊತೆ ಒಪ್ಪಂದ ಮಾಡಿಕೊಂಡು, ರಾಜ್ಯಾದಾದ್ಯಂತ ತನ್ನ ಸದಸ್ಯ ಸಹಕಾರ ಸಂಘಗಳ ಇ-ಸ್ಟಾಂಪಿಂಗ್ ಕೇಂದ್ರಗಳಿಗೆ ಛಾಪಾ ಕಾಗದಗಳನ್ನು ಮುದ್ರಿಸಲು ಪರವಾನಗಿಗಳನ್ನು ಮಂಜೂರು ಮಾಡಿಸಿಕೊಟ್ಟಿದೆ.

ಶಿಕ್ಷಣ ತರಬೇತಿ:- ಮಹಾಮಂಡಳವು ರಾಜ್ಯದಲ್ಲಿನ ಸದಸ್ಯ ಸಂಘಗಳ ಆಡಳಿತಮಂಡಳಿ ಪದಾಧಿಕಾರಿಗಳಿಗೆ, ನಿರ್ದೇಶಕರುಗಳಿಗೆ, ಸದಸ್ಯರುಗಳಿಗೆ, ಸಿಬ್ಬಂದಿಗಳಿಗೆ, ಸಹಕಾರ ಕಾಯ್ದೆ, ನಿಯಮ, ಠೇವಣಿ ಸಂಗ್ರಹಣೆ. ನಿಧಿಗಳ ನಿರ್ವಹಣೆ, ಎನ್.ಪಿ.ಎ ಸುಸ್ತಿ ಸಾಲ ವಸೂಲಾತಿ, ಲೆಕ್ಕಪತ್ರಗಳ ನಿರ್ವಹಣೆ, ಜಿ.ಎಸ್.ಟಿ ಕುರಿತಂತೆ, ಇ-ಸ್ಟಾಂಪಿಂಗ್ ಕುರಿತಂತೆ ಹಾಗೂ ಲೆಕ್ಕಪರಿಶೋಧನೆಗೆ ಸಂಬಂಧಪಟ್ಟ ಸೂಕ್ತ ಸಲಹೆ, ಸೂಚನೆ. ಮಾರ್ಗದರ್ಶನ ನೀಡುವುದಲ್ಲದೇ, ಸಂಘಗಳ ಅಭಿವೃದ್ಧಿಗೆ ಚಿಂತನೆ ನಡೆಸಿ ತರಬೇತಿ ನೀಡುತ್ತಾ ಬಂದಿದೆ.

ಸಾಧನೆಗಳು:-

ಅ)ಆದಾಯ ತೆರಿಗೆ ಕಾಯ್ದೆ ಕಲಂ.80(ಪಿ) 4ಕ್ಕೆ ತಂದ ತಿದ್ದುಪಡಿ ಕಾಯ್ದೆಯಿಂದ 80(ಪಿ)(2)ರಲ್ಲಿ ಇದ್ದ ರಿಯಾಯಿತಿಯು ಮುಂದುವರೆಯುವ ಕುರಿತು ಪತ್ತಿನ ಸಂಘಗಳಿಗೆ ಸೂಕ್ತ ಸಲಹೆ ಮತ್ತು ಮಾರ್ಗದರ್ಶನವನ್ನು ನೀಡಲಾಗಿರುತ್ತದೆ. ಈ ಸಂಬಂಧ ಟ್ರಿಬ್ಯೂನಲ್ ಮತ್ತು ನ್ಯಾಯಾಲಯಗಳಲ್ಲಿ ನೀಡಿರುವ ತೀರ್ಪುಗಳ ಬಗ್ಗೆ ಸಹ ಸಂಘಗಳ ಗಮನಕ್ಕೆ ತಂದು ಸಲಹೆಗಳನ್ನು ನೀಡಲಾಗುತ್ತಿದೆ.
ಆ)ಸಹಕಾರ ಸಂಘಗಳ ಲೆಕ್ಕಪರಿಶೋಧನೆಗೆ ವಿಧಿಸುವ ಶುಲ್ಕವು ದುಬಾರಿಯಾಗಿದ್ದು ಲೆಕ್ಕಪರಿಶೋಧಕರು. ಸಂಘದ ಲೆಕ್ಕಪರಿಶೋಧನೆಗೆ ಬಳಕೆಯಾಗುವ ಮಾನವ ಸಂಪನ್ಮೂಲದ ದಿನಗಳ ಮೇಲೆ ಅವರಿಗೆ ಲಭ್ಯವಿರುವ ವೇತನ ಮತ್ತು ಇತರೆ ಭತ್ಯೆಗಳನ್ನು ಮಾತ್ರ ಪರಿಗಣಿಸಿ ಲೆಕ್ಕಪರಿಶೋಧನಾ ಶುಲ್ಕ ವಿಧಿಸುವಂತೆಯು ಇಲ್ಲವೆ 5 ಕೋಟಿಗಳಿಗೂ ಮೀರಿದ ವ್ಯವಹಾರವಿರುವ ಲೆಕ್ಕಪರಿಶೋಧನೆಯನ್ನು ಚಾರ್ಟೆಡ್ ಅಕೌಂಟೆಂಟ್‌ಗಳಿಗೆ ವಹಿಸಲು ಸರ್ಕಾರವನ್ನು ಆಗ್ರಹಿಸಿದ ಸಂಸ್ಥೆ ಪತ್ತಿನ ಮಹಾಮಂಡಳ. ಅದರ ಫಲವಾಗಿ ಈಗ ಸುಲಭದ ದರದಲ್ಲಿ ಲೆಕ್ಕಪರಿಶೋಧನೆ ಮಾಡಿಸಿಕೊಳ್ಳಲು ಅವಕಾಶ ಬಂದಿರುವುದು ಸ್ವಾಗತಾರ್ಹ
ಇ)ಪತ್ತಿನ ಸಹಕಾರ ಸಂಘಗಳು ಸಂಗ್ರಹಿಸುತ್ತಿದ್ದ ಮೂರನೇ ವ್ಯಕ್ತಿಯ ಅಕೌಂಟ್ ಪೇಯಿ ಚೆಕ್ಕುಗಳ ನಗದೀಕರಣಕ್ಕೆ ಭಾರತೀಯ ರಿಸರ್ವ್ ಬ್ಯಾಂಕಿನವರ ನಿರ್ಬಂದ ಹಾಗೂ ಈ ನಿರ್ಬಂಧದಿಂದ ಹೊರಬರಲು ಇರುವ ಅವಕಾಶ ಹಾಗೂ ಅದರಿಂದ ಆಗುವ ತೊಂದರೆಯನ್ನು ಮಹಾಮಂಡಳ ಮತ್ತು ಪತ್ತಿನ ಸಹಕಾರ ಸಂಘಗಳು ಆರ.ಬಿ.ಐ ಗೆ ಮನವರಿಕೆ ಮಾಡಿದ ಪ್ರಯತ್ನದ ಫಲವಾಗಿ ಮೂರನೇ ವ್ಯಕ್ತಿಗಳ ಚೆಕ್ ಮೊತ್ತ ರೂ.50,000-00ಗಳವರೆಗೆ ನಗದೀಕರಣಕ್ಕೆ ಅನುಮತಿ ನೀಡಿದೆ.

ಸಹಕಾರ ವಾರ್ತಾಪತ್ರಿಕೆ:-

ಮಹಾಮಂಡಳದ ವತಿಯಿಂದ ಪ್ರತಿ ಮಾಹೆಯ ಸಹಕಾರ ವಾರ್ತಾಪತ್ರಿಕೆಯನ್ನು ಮುದ್ರಿಸಿ ಚಂದಾದಾರರಾಗಿರುವ ಎಲ್ಲಾ ಸದಸ್ಯ ಸಹಕಾರ ಸಂಘಗಳ ಅನುಕೂಲಕ್ಕಾಗಿ ಸಹಕಾರ ಸಂಘಗಳು ಅನುಸರಿಸಬೇಕಾದ ಮಾಹಿತಿಗಳ ಜೊತೆಗೆ ರಾಜ್ಯ ಸರ್ಕಾರ ಹಾಗೂ ಸಹಕಾರ ಇಲಾಖೆಯು ಆಗಿಂದ್ದಾಗೆ ಹೊರಡಿಸುವ ಸುತ್ತೋಲೆಗಳನ್ನು, ಆದೇಶಗಳನ್ನು, ಕಾಯ್ದೆಯ ತಿದ್ದುಪಡಿಗಳನ್ನು ಆದಾಯ ತೆರಿಗೆ ಕುರಿತು. ನುರಿತ ಸಹಕಾರ ತಜ್ಞದಿಂದ ಲೇಖನಗಳನ್ನು ಪಡೆದು ಪ್ರತಿ ಮಾಹೆಯ ಸಹಕಾರ ವಾರ್ತಾ ಪತ್ರಿಕೆಯಲ್ಲಿ ಪ್ರಕಟಿಸಿ ಚಂದಾದಾರರಾಗಿರುವ ಎಲ್ಲಾ ಸಹಕಾರ ಸಂಘಗಳಿಗೂ ಅಂಚೆ ಮೂಲಕ ಅವರವರ ಕಛೇರಿಗೆ ಹಂಚಿಕೆ ಮಾಡಲಾಗುತ್ತಿದೆ.

ವೆಬ್ ಸೈಟ್/ಅಂತರಜಾಲ ನಿಘಂಟು (www----) ಮಹಾಮಂಡಳವು ಸದಸ್ಯ ಸಹಕಾರ ಸಂಘಗಳ ಅನುಕೂಲಕ್ಕಾಗಿ ತನ್ನದೇ ಆದ ವೆಬ್‌ಸೈಟ್ ಅನ್ನು ಸಿದ್ಧಪಡಿಸಿ ಬಿಡುಗಡೆ ಮಾಡಿದ್ದು ಎಲ್ಲಾ ಸದಸ್ಯ ಸಹಕಾರ ಸಂಘಗಳು ತಮಗೆ ಅಗತ್ಯವಿರುವ ಮಾದರಿ ಉಪನಿಯಮ, ಕೇಂದ್ರ ಮತ್ತು ರಾಜ್ಯ ಸರ್ಕಾರವು ಹೊರಡಿಸುವ ಸುತ್ತೋಲೆಗಳನ್ನು, ಆದೇಶಗಳನ್ನು. ತಿದ್ದುಪಡಿ ಕಾಯ್ದೆಗಳನ್ನು ಆದಾಯ ತೆರಿಗೆಗೆ ಸಂಬಂಧಿಸಿದ ಮಾರ್ಗದರ್ಶನವನ್ನು ಶಿಕ್ಷಣ ತರಬೇತಿ ಕಾರ್ಯಾಗಾರದ ವರದಿಗಳನ್ನು, ಇ-ಸ್ಟಾಂಪಿಂಗ್ ಹಾಗೂ ಸಹಕಾರ ಕ್ಷೇತ್ರಕ್ಕೆ ಸಂಬಂಧಪಟ್ಟ ಸಮಸ್ಯೆಗಳ ಬಗ್ಗೆ ಪರಿಹಾರದ ಸಮಗ್ರ ಮಾಹಿತಿಗಳನ್ನು ಒಟ್ಟುಗೂಡಿಸಿ ನೀಡುತ್ತಿದ್ದು ಅವಶ್ಯಕವಿರುವ ಮಾಹಿತಿಯನ್ನು ಆಸಕ್ತರು ವೆಬ್‌ಸೈಟ್ ಮುಖೇನ ಪಡೆದುಕೊಳ್ಳುತ್ತಿರುವುದು ಸಂತೋಷದ ವಿಷಯವಾಗಿರುತ್ತದೆ. ಈ ರೀತಿಯಾಗಿ ಪತ್ತಿನ ಸಹಕಾರ ಸಂಘಗಳನ್ನು ಸಂಘಟಿಸಿ ಅವುಗಳ ಅಭಿವೃದ್ಧಿಗೆ ಪ್ರೋತ್ಸಾಹಿಸುವುದು ಮತ್ತು ಅವುಗಳ ಕಾರ್ಯವೈಖರಿ ಕುರಿತು ಮಾರ್ಗದರ್ಶನ ನೀಡಿ, ರಾಜ್ಯದಲ್ಲಿ ಮಾದರಿ ಸಂಸ್ಥೆಯಾಗಿ ಕಾರ್ಯನಿರ್ವಹಿಸಬೇಕೆಂಬುದು ಮಹಾಮಂಡಳದ ಪ್ರಮುಖ ಉದ್ದೇಶವಾಗಿರುತ್ತದೆ.