+91 80 2244 4033 ksccsfltd@gmail.com

Karnataka State Co-Op Credit Societies Federation Ltd.

ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ನಿಯಮಿತ

Smt K.Lalitha G.T.Devegowda

ಶ್ರೀಮತಿ ಕೆ. ಲಲಿತ ಜಿ.ಟಿ. ದೇವೇಗೌಡ ಅಧ್ಯಕ್ಷರು

ಸಹಕಾರ ರತ್ನ ಪುರಸ್ಕೃತ ದಿ||ಬಿ.ಎಲ್.ಲಕ್ಕೇಗೌಡರ ಮುಂದಾಳತ್ವದಲ್ಲಿ ಸ್ಥಾಪಿತವಾದ ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಮಹಾಮಂಡಳವು ತನ್ನಲ್ಲಿ ಸದಸ್ಯತ್ವ ಪಡೆದ ಪತ್ತಿನ ಸಹಕಾರ ಸಂಘಗಳು ಮತ್ತು ಇತರೆ ಸಹಕಾರ ಸಂಘಗಳಿಗೆ ಆಶ್ರಯ ಸಂಸ್ಥೆಯಾಗಿ 17 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ವಿಷಯವಾಗಿರುತ್ತದೆ.

ಕಳೆದ ವರ್ಷ ಪತ್ತಿನ ಸಹಕಾರ ಸಂಘಗಳಿಗೆ ಹಾಗೂ ಇತರೆ ಸಹಕಾರ ಸಂಘಗಳಿಗೆ ಅತ್ಯಧಿಕ ಸವಾಲಿನ ವರ್ಷವಾಗಿತ್ತು. ಪ್ರಪಂಚದಾದ್ಯಂತ ಕೋವಿಡ್-19 ರ ಮಹಾಮಾರಿಯಿಂದ ವಿಶ್ವದ ಆರ್ಥಿಕ ವ್ಯವಸ್ಥೆಯಲ್ಲಿ ಏರಿಳಿಕೆ ಕಂಡಿರುತ್ತದೆ. ಈ ನಡುವೆ ಸಹಕಾರ ಚಳುವಳಿ ಆಶಾದಾಯಕ ಬೆಳವಣಿಗೆ ಕಂಡಿದೆಯಾದರೂ ಪತ್ತಿನ ಸಹಕಾರ ಸಂಘಗಳು ಹಾಗೂ ಇತರೆ ಸಹಕಾರ ಸಂಘಗಳು ತಮ್ಮ ಆರ್ಥಿಕ ವ್ಯವಹಾರಗಳನ್ನು ವೃದ್ಧಿಸಿಕೊಳ್ಳುವ ಮೂಲಕ ಸಹಕಾರ ಚಳುವಳಿಯ ಬಲವರ್ಧನೆಯ ಜೊತೆಗೆ ಸದಸ್ಯರು, ಗ್ರಾಹಕರ ಹಿತಕಾಯುವ ಕೆಲಸವನ್ನು ಮಾಡುತ್ತಿವೆ. ನಷ್ಟದಲ್ಲಿರುವ ಸಹಕಾರ ಸಂಘಗಳು ಪುನಶ್ಚೇತನಗೊಂಡು ತಮ್ಮ ಆರ್ಥಿಕ ಸ್ಥಿತಿಯನ್ನು ಸರಿದಾರಿಗೆ ತರುವಲ್ಲಿ ಸಫಲರಾಗಲೆಂದು ಮಹಾಮಂಡಳದ ಪರವಾಗಿ ಹಾರೈಸುತ್ತೇನೆ.

ರಾಜ್ಯದಲ್ಲಿ ಸುಮಾರು 4500 ಕ್ಕೂ ಅಧಿಕ ಪತ್ತಿನ ಸಹಕಾರ ಸಂಘಗಳು ಅಂದಾಜು ರೂ. 222482 ಕೋಟಿ ದುಡಿಯುವ ಬಂಡವಾಳವನ್ನು ಹೊಂದಿರುತ್ತವೆ. ಮುಂದಿನ ದಿನಮಾನಗಳಲ್ಲಿ ಮತ್ತಷ್ಟು ಆರ್ಥಿಕ ಪ್ರಗತಿ ಹೊಂದಿ ಸದಸ್ಯ, ಗ್ರಾಹಕ ಸ್ನೇಹಿಯಾಗಿ ಕಾರ್ಯನಿರ್ವಹಿಸಲಿ ಎಂದು ಆಶಿಸುತ್ತೇನೆ.

ಮಹಾಮಂಡಳವು ಪತ್ತಿನ ಸಹಕಾರ ಸಂಘಗಳನ್ನು ಹಾಗೂ ಸಾಲ ಸೌಲಭ್ಯ ನೀಡುತ್ತಿರುವ ವಿವಿಧೋದ್ದೇಶ ಸಹಕಾರ ಸಂಘಗಳನ್ನು ಸದಸ್ಯರನ್ನಾಗಿ ನೋಂದಾಯಿಸಿಕೊಂಡು ಕಾರ್ಯನಿರ್ವಹಿಸುತ್ತಿದೆ. ಒಟ್ಟು 1595 ಇ-ಸ್ಟಾಂಪಿಂಗ್ ಕೇಂದ್ರಗಳಿಗೆ ಇ-ಸ್ಟಾಂಪಿಂಗ್ ಪರವಾನಗಿ ನೀಡಲಾಗಿದ್ದು, ಈ ಎಲ್ಲಾ ಸಂಸ್ಥೆಗಳು ಕೂಡ ಆರ್ಥಿಕವಾಗಿ ಬೆಳವಣಿಗೆ ಕಾಣುತ್ತಿವೆ.

ಪತ್ತಿನ ಸಹಕಾರ ಮಹಾಮಂಡಳವು ಈಗಾಗಲೇ ಸ್ವಂತ ನಿವೇಶನದಲ್ಲಿ ಆಡಳಿತ ಮಂಡಳಿಯ ಸದಸ್ಯರ ಸಹಕಾರದೊಂದಿಗೆ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡುತ್ತಿದ್ದು 2022ರ ವರ್ಷದಲ್ಲಿ ಕಟ್ಟಡ ನಿರ್ಮಾಣ ಕಾರ್ಯ ಪೂರ್ಣಗೊಳಿಸಿ ಕಾರ್ಯಾರಂಭ ಮಾಡಲು ಸಿದ್ದತೆ ನಡೆಸಿದೆ. ರಾಜ್ಯದ ಎಲ್ಲಾ ಸಹಕಾರ ಸಂಘಗಳು ಹಾಗೂ ಸಹಕಾರಿಗಳು ಈ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಪೂರ್ಣ ಪ್ರಮಾಣದ ಬೆಂಬಲ, ನೆರವು ನೀಡುತ್ತೀರೆಂದು ಭಾವಿಸುತ್ತೇನೆ. ಸಮಸ್ತ ಜನತೆಗೆ, ಸಹಕಾರಿ ಬಂಧುಗಳಿಗೆ ಸಹಕಾರ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿರುವ ಅಧಿಕಾರಿ, ಸಿಬ್ಬಂದಿ ವರ್ಗದವರಿಗೆ ಆಯುರಾರೋಗ್ಯ, ಸುಖ, ಸಂತೋಷ ಮತ್ತು ನೆಮ್ಮದಿ ತರಲೆಂದು ಶುಭ ಹಾರೈಸುತ್ತೇನೆ.

ಕೆ.ಲಲಿತ. ಜಿ.ಟಿ.ದೇವೇಗೌಡ
ಅಧ್ಯಕ್ಷರು
ಕರ್ನಾಟಕ ರಾಜ್ಯ ಸಹಕಾರ ಪತ್ತಿನ
ಸಂಘಗಳ ಮಹಾಮಂಡಳ ನಿ., ಬೆಂಗಳೂರು

Back To Top