+91 80 2244 4033 ksccsfltd@gmail.com

Karnataka State Co-Op Credit Societies Federation Ltd.

ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ನಿಯಮಿತ

03-02-2018 ರಂದು ಹೋಟೆಲ್ ಕೂರ್ಗ್ ಇಂಟರ್ ನ್ಯಾಷನಲ್, ಮಡಿಕೇರಿ ಇಲ್ಲಿ ನಡೆದ ಮೈಸೂರು ವಿಭಾಗದ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಮುಖ್ಯಕಾರ್ಯನಿರ್ವಹಣಾಧಿಕಾರಿಗಳಿಗೆ ಒಂದು ದಿನದ ತರಬೇತಿ ಕಾರ್ಯಾಗಾರ

ದಿನಾಂಕ: 03-02-2018 ರಂದು ಹೋಟೆಲ್ ಕೂರ್ಗ್ ಇಂಟರ್ ನ್ಯಾಷನಲ್, ಮಡಿಕೇರಿ ಇಲ್ಲಿ ನಡೆದ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು, ಕರ್ನಾಟಕ ರಾಜ್ಯ ಪತ್ತಿನ ಸಹಕಾರ ಸಂಘಗಳ ಮಹಾಮಂಡಳ ನಿ., ಬೆಂಗಳೂರು, ಕೊಡಗು ಜಿಲ್ಲಾ ಸಹಕಾರ ಯೂನಿಯನ್ ನಿ., ಮಡಿಕೇರಿ ಹಾಗೂ ಸಹಕಾರ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ, ಮೈಸೂರು ವಿಭಾಗದ ಪತ್ತಿನ ಸಹಕಾರ ಸಂಘಗಳ ಸರ್ವತೋಮುಖ ಅಭಿವೃದ್ದಿಗಾಗಿ ಅಧ್ಯಕ್ಷರು ಮತ್ತು ಮುಖ್ಯಕಾರ್ಯನಿರ್ವಹಣಾಧಿಕಾರಿಗಳಿಗೆ ಒಂದು ದಿನದ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದ್ದು ಸದರಿ ಕಾರ್ಯಾಗಾರದ ಉದ್ಘಾಟನೆಯನ್ನು ಶ್ರೀ ಸಿ.ಎಂ.ಮಾರೇಗೌಡ, ಅಧ್ಯಕ್ಷರು, ರಾಜ್ಯ ಪತ್ತಿನ ಸಹಕಾರ ಮಹಾಮಂಡಳ ನಿ., ಇವರು ಉದ್ಘಾಟಿಸಿದರ, ಶ್ರೀ ಎಂ.ಕೆ.ಮನುಮುತ್ತಪ್ಪ, ನಿರ್ದೇಶಕರು, ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು ಇವರು ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದರು, ಮುಖ್ಯಅಥಿಗಳಾಗಿ ರಾಜ್ಯ ಪತ್ತಿನ ಸಹಕಾರ ಮಹಾಮಂಡಳದ ನಿರ್ದೇಶಕರಾದ ಶ್ರೀ.ಪಿ.ಕೆ.ಜಯಕೃಷ್ಣೇಗೌಡ, ಶ್ರೀ ಎಂ.ಜೆ.ನರೇಂದ್ರ ಕುಮಾರ, ರಾಜ್ಯ ಸಹಕಾರ ಮಹಾಮಂಡಳದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಎಸ್.ಎನ್.ಅರುಣ್‍ಕುಮಾರ್, ಕೋಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‍ನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಪಿ.ಎಲ್.ಜ್ಯೋತ್ರೀಂದ್ರ, ಕೋಡಗು ಜಿಲ್ಲೆಯ ಸಹಕಾರ ಸಂಘಗಳ ಉಪನಿಬಂಧಕರಾದ ಶ್ರೀ ಭಾಸ್ಕರಾಚಾರ್, ಮತ್ತು ಶ್ರೀ ಹೆಚ್.ಡಿ.ರವಿಕುಮಾರ್, ಸಹಕಾರ ಸಂಘಗಳ ಸಹಾಯಕ ನಿಂಬಂಧಕರಾದ ಶ್ರೀ ಹೆಚ್.ಡಿ.ರವಿಕುಮಾರ್ ಹಾಗೂ ಕೋಡಗು ಜಿಲ್ಲಾ ಸಹಕಾರ ಯೂನಿಯನ್‍ನ ನಿರ್ದೇಶಕರಾದ ಶ್ರೀ ಎಸ್.ಪಿ.ನಿಂಗಪ್ಪ ರವರು ಹಾಜರಿದ್ದರು ಹಾಗೂ ಸದರಿ ಕಾರ್ಯಾಗಾರದಲ್ಲಿ ರಾಜ್ಯ ಸಹಕಾರ ಮಹಾಮಂಡಳದ ಅಧಿಕಾರಿಗಳಾದ ಡಾ|| ಎಲ್.ಸ್ವಾಮೀಗೌಡ, ಲೆಕ್ಕಾಧಿಕಾರಿ (ಪ್ರ) ಮತ್ತು ಸಮನ್ವಯಾಧಿಕಾರಿ ಮತ್ತು ಶ್ರೀಮತಿ ವೀಣಾ ನಾಗೇಶ್, ಹಾಗೂ ರಾಜ್ಯ ಪತ್ತಿನ ಸಹಕಾರ ಮಹಾಮಂಡಳದ ಮುಖ್ಯಕಾರ್ಯನಿರ್ವಹಣಾಧಿಕಾರಿಯಾದ ಶ್ರೀ ಕೆ.ಎಸ್.ಗುರುಪ್ರಸಾದ್ ಮತ್ತು ಕೋಡಗು ಜಿಲ್ಲಾ ಸಹಕಾರ ಯೂನಿಯನ್‍ನ ಮುಖ್ಯಕಾರ್ಯನಿರ್ವಹಣಾಧಿಕಾರಿಯಾದ ಶ್ರೀ ಯೋಗಿಂದ್ರ ನಾಯ್ಕ ರವರು ಹಾಜರಿದ್ದರು.
ಪ್ರಾರ್ಥನೆ: ಶ್ರೀಮತಿ ಆರ್.ಮಂಜುಳ, ಕೋಡಗು ಜಿಲ್ಲಾ ಸಹಕಾರ ಯೂನಿಯನ್‍ನ ವ್ಯವಸ್ಥಾಪಕಿ
ಸ್ವಾಗತ: ಡಾ|| ಎಲ್.ಸ್ವಾಮೀಗೌಡ, ಲೆಕ್ಕಾಧಿಕಾರಿ (ಪ್ರ)
ವಂದನಾರ್ಪಣೆ: ಶ್ರೀ ಕೆ.ಎಸ್.ಗುರುಪ್ರಸಾದ್, ಮುಖ್ಯಕಾರ್ಯನಿರ್ವಹಣಾಧಿಕಾರಿಗಳು, ಕ.ರಾ.ಸ.ಪ.ಸಂ.ಮ.ನಿ., ಬೆಂಗಳೂರು
ನಿರೂಪಣೆ: ಶ್ರೀ ಯೋಗೇಂದ್ರ ನಾಯ್ಕ, ಮುಖ್ಯಕಾರ್ಯನಿರ್ವಹಣಾಧಿಕಾರಿ ಕೋಡಗು ಜಿಲ್ಲಾ ಸಹಕಾರ ಯೂನಿಯನ್

Back To Top