+91 80 2244 4033 ksccsfltd@gmail.com

Karnataka State Co-Op Credit Societies Federation Ltd.

ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ನಿಯಮಿತ

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಮತ್ತು ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳದ ಸಂಯುಕ್ತಾಶ್ರಯದಲ್ಲಿ ಬೆಂಗಳೂರಿನಲ್ಲಿ ನಡೆದ ಶಿಕ್ಷಣ ತರಬೇತಿ ಕಾರ್ಯಗಾರ

ಬೆಂಗಳೂರು: ದಿನಾಂಕ: 12.3.2019 ರಂದು ಹೋಟೆಲ್ ಸ್ಯಾಂಕ್ಟಮ್, ಆನಂದರಾವ್ ವೃತ್ತ, ಬೆಂಗಳೂರು ಇಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಮತ್ತು ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ, ಬೆಂಗಳೂರು ನಗರÀ ಮತ್ತು ಗ್ರಾಮಾಂತರ ಜಿಲ್ಲಾ ಸಹಕಾರ ಯೂನಿಯನ್ ಮತ್ತು ಸಹಕಾರ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಬೆಂಗಳೂರು ವಿಭಾಗದ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಮುಖ್ಯಕಾರ್ಯನಿರ್ವಹಣಾಧಿಕಾರಿಗಳಿಗಾಗಿ ಒಂದು ದಿನದ ಶಿಕ್ಷಣ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಬೆಂಗಳೂರು, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಗುರುಸ್ವಾಮಿ ಅವರು ಮಾತನಾಡಿ, ಪತ್ತಿನ ಸಂಘಗಳ ಕಾರ್ಯಕ್ಷಮತೆ ಮತ್ತು ಸಾಧನೆಯನ್ನು ಪ್ರಶಂಸಿಸಿದರು. ಪತ್ತಿನ ಸಹಕಾರ ಸಂಘಗಳಲ್ಲಿ ಸಾಲವನ್ನು ಸಕಾಲದಲ್ಲಿ ನೀಡಬೇಕು. ಅದರಂತೆ “ಸಾಲ ವಸೂಲಾತಿ’’ ಶಬ್ಧಕ್ಕೆ ಬದಲಾಗಿ ಸಾಲ ಮರುಪಾವತಿ ಸಂಸ್ಕøತಿ ಜಾರಿಯಾಗಬೇಕು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ರಾಜ್ಯ ಸಹಕಾರ ಮಹಾಮಂಡಳ ಮತ್ತು ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳದ ಅಧ್ಯಕ್ಷರುಗಳಾದ ಶ್ರೀ ಎನ್.ಗಂಗಣ್ಣ ಮತ್ತು ಶ್ರೀ ಸಿ.ಎಂ.ಮಾರೇಗೌಡ ಹಾಗೂ ರಾಜ್ಯ ಸಹಕಾರ ಮಹಾಮಂಡಳ ಮತ್ತು ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ಉಪಾಧ್ಯಕ್ಷರುಗಳಾದ ಶ್ರೀ ಎನ್. ಚಂದ್ರಪ್ಪ ಮತ್ತು ಡಾ|| ಸಂಜಯ ಪಂ. ಹೊಸಮಠ ಹಾಗೂ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕರಾದ ಶ್ರೀ ಹೆಚ್.ವಿ. ನಾಗರಾಜು ಮತ್ತು ಪತ್ತಿನ ಮಹಾಮಂಡಳದ ನಿರ್ದೇಶಕರಾದ ಶ್ರೀ ಎಂ.ಜೆ.ನರೇಂದ್ರ ಕುಮಾರ, ಶ್ರೀ ಕೆ.ಕೃಷ್ಣಮೂರ್ತಿ, ಶ್ರೀ ಎನ್.ಬಿ.ರವೀಶಯ್ಯ, ಶ್ರೀ ಕೆ.ಕೆ.ಮಹೇಂದ್ರಪ್ರಸಾದ್ ಗೌಡ ಮತ್ತು ಶ್ರೀ ತಮ್ಮಣ್ಣ ಬಿ.ಕೆಂಚರಡ್ಡಿ ರವರುಗಳು ಉಪಸ್ಥಿತರಿದ್ದರು.

ಈ ಸಂಧರ್ಭದಲ್ಲಿ ರಾಜ್ಯ ಸಹಕಾರ ಮಹಾಮಂಡಳ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಎಸ್.ಎನ್. ಅರುಣ್‍ಕುಮಾರ್ ರವರು, ರಾಜ್ಯ ಸಹಕಾರ ಪತ್ತಿನ ಮಹಾಮಂಡಳದ ಪ್ರಭಾರ ಮುಖ್ಯಕಾರ್ಯನಿರ್ವಹಣಾಧಿಕಾರಿಯಾದ ಶ್ರೀಮತಿ ಪಿ. ಆಶಾಲತಾ ಮತ್ತು ಕಾರ್ಯಕ್ರಮದ ಸಮನ್ವಯಾಧಿಕಾರಿಯಾದ ಶ್ರೀ ಎಸ್.ಎನ್. ವೇಣುಗೋಪಾಲ್ ಹಾಗೂ ಮತ್ತಿತರರು ಹಾಜರಿದ್ದರು.
ಕಾರ್ಯಕ್ರಮದಲ್ಲಿ ಪತ್ತಿನ ಸಹಕಾರ ಸಂಘಗಳಿಗೆ ಅನ್ವಯವಾಗುವ ಜಿ.ಎಸ್.ಟಿ. ವಿಷಯದ ಬಗ್ಗೆ ಶ್ರೀ ಬಿ.ಎನ್. ಬಿರಾದಾರ್, (ನಿವೃತ್ತ ವಾಣಿಜ್ಯ ತೆರಿಗೆಗಳ ಸಹಾಯಕ ಆಯುಕ್ತರು) ಇವರು ಉಪನ್ಯಾಸ ನೀಡಿದರು. ನಂತರ ಪ್ರತಿನಿಧಿಗಳೊಂದಿಗೆ ಚರ್ಚೆ ಮತ್ತು ಸಮಾಲೋಚನೆಗಳು ನಡೆದವು.

ಕಾರ್ಯಕ್ರಮದ ಆರಂಭದಲ್ಲಿ ಸಹಕಾರ ಮಹಾಮಂಡಳದ ಸಿಬ್ಬಂದದಿಯಾದ ಶ್ರೀಮತಿ ಜಯಶ್ರೀ ರವರು ಪ್ರಾರ್ಥನೆ ಮಾಡಿದರು. ಕೊನೆಯಲ್ಲಿ ಕಾರ್ಯಕ್ರಮದ ಸಮನ್ವಯಾಧಿಕಾರಿ ಶ್ರೀ ಎಸ್.ಎನ್. ವೇಣುಗೋಪಾಲ್ ಅವರು ವಂದನಾರ್ಪಣೆ ಮಾಡಿದರು.

Back To Top