+91 80 2244 4033 ksccsfltd@gmail.com

Karnataka State Co-Op Credit Societies Federation Ltd.

ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ನಿಯಮಿತ

ಕಲಬುರಗಿ ನಗರದಲ್ಲಿ ಪತ್ತಿನ ಸಹಕಾರ ಸಂಘಗಳಿಗೆ ಎಚ್ .ಕೆ.ಸಿ.ಸಿ.ಐ ಸಭಾಂಗಣದಲ್ಲಿ ನಡೆದ ಒಂದು ದಿನದ ತರಬೇತಿ ಕಾರ್ಯಾಗಾರ

ದಿನಾಂಕ: 27-02-2017 ರಂದು ಛೇಂಬರ್ ಆಫ್ ಕಾಮರ್ಸ್, ಕಲಬುರರ್ಗಿ ಇಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು ಇವರ ನೇತೃತ್ವ ಹಾಗೂ ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ಇವರ ಸಹಯೋಗದೊಂದಿಗೆ ಕಲಬುರ್ಗಿ ವಿಭಾಗ ಪತ್ತಿನ ಸಹಕಾರ ಸಂಘಗಳ ಸರ್ವತೋಮುಖ ಅಭಿವೃದ್ದಿಗಾಗಿ ಅಧ್ಯಕ್ಷರು ಮತ್ತು ಮುಖ್ಯಕಾನಿರ್ವಹಣಾಧಿಕಾರಿಗಳಿಗೆ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದ್ದು ಸದರಿ ಕಾರ್ಯಾಗಾರವನ್ನು ಡಾ: ಸಂಜಯ್ ಪಿ. ಹೊಸಮಠ, ಉಪಾಧ್ಯಕ್ಷರು, ಕ.ರಾ.ಸ.ಸಂ.ಪ.ಮ.ನಿ., ಬೆಂಗಳೂರು ಇವರು ಉದ್ಘಾಟಿಸಿ ಕಾರ್ಯಾಗಾರದ ಮಹತ್ವವನ್ನು ಹಾಜರಿದ್ದ ಎಲ್ಲಾ ಶಿಬಿರಾರ್ತಿಗಳಿಗೆ ಮನವರಿಕೆ ಮಾಡಿಕೊಟ್ಟರು.
ಕಾರ್ಯಾಗಾರದ ಅಧ್ಯಕ್ಷತೆಯನ್ನು ಶ್ರೀ ವೀರನಗೌಡ ಪಾಟೀಲ್, ಅಧ್ಯಕ್ಷರು ಕಲಬುರ್ಗಿ-ಯಾದಗಿರಿ ಜಿಲ್ಲಾ ಸಹಕಾರ ಯೂನಿಯನ್ ನಿ., ಕಲಬುರ್ಗಿ ರವರು ವಹಿಸಿದ್ದರು, ಮುಖ್ಯಅತಿಥಿಗಳಾಗಿ ರಾಜ್ಯ ಪತ್ತಿನ ಸಹಕಾರ ಮಹಾಮಂಡಳದ ನಿರ್ದೇಶಕರುಗಳಾದ ಶ್ರೀ ಶಿವರಾಜ್ ಬಿ. ಪಾಟೀಲ್, ಶ್ರೀ ಆಕಶಾ ಪಾಟೀಲ, ಶ್ರೀ ಧರೇಪ್ಪ ಎಂ. ಅಲಗೂರ, ಶ್ರೀ ಗುರುಪಾದಪ್ಪಗೌಡ ಬ. ಪಾಟೀಲ್, ಮತ್ತು ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕರಾದ ಶ್ರೀಮತಿ ಶಕುಂತಲಾ ಕೆ. ಬೆಲ್ದಾಳೆ ರವರು ಭಾಗವಹಿಸಿದ್ದರು ಶ್ರೀ ಟಿ. ಪೈರೋಜ್, ಕೆ.ಸಿ.ಎಸ್, ಸಹಕಾರ ಸಂಘಗಳ ಉಪನಿಬಂಧಕರು, ಕಲಬುರ್ಗಿ ಜಿಲ್ಲೆ ಇವರು ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ್ದರು, ರಾಜ್ಯ ಸಹಕಾರ ಮಹಾಮಂಡಳದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಎಸ್.ಎನ್. ಅರುಣ್‍ಕುಮಾರ್, ಕೆ.ಸಿ.ಎಸ್ ರವರು ಕಾರ್ಯಾಗಾರದ ಪ್ರಸ್ತಾವಿ ಭಾಷಣವನ್ನು ಮಾಡಿದರು ಹಾಗೂ ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳದ ಮುಖ್ಯಕಾರ್ಯನಿರ್ವಹಣಾಧಿಕಾರಿಯಾದ ಶ್ರೀ ಕೆ.ಎಸ್.ಗುರುಪ್ರಸಾದ್ ರವರು ಉಪಸ್ಥಿತರಿದ್ದರು.
ಶ್ರೀ ಶಿವರಾಜ್ ಬಿ. ಪಾಟೀಲ್, ನಿರ್ದೇಶಕರು, ಕ.ರಾ.ಸ.ಪ.ಸಂ.ಮ.ನಿ., ಬೆಂಗಳುರು ರವರು ಮುಖ್ಯಅತಿಥಿ ಭಾಷಣಮಾಡಿದರು ಕಾರ್ಯಾಗಾರದ ಸ್ವಾಗತವನ್ನು ಕಲಬುರ್ಗಿ-ಯಾದಗಿರಿ ಜಿಲ್ಲಾ ಸಹಕಾರ ಯೂನಿಯನ್ ಮುಖ್ಯಕಾರ್ಯಾನಿರ್ವಹಣಾಧಿಕಾರಿಯಾದ ಶ್ರೀಮತಿ ಶೈಲಜ ಚವ್ಹಾಣ್ ರವರು ಮಾಡಿದರು ಕಲಬುರ್ಗಿಯ ಕೆ.ಐ.ಸಿ.ಎಂ ನ ಪ್ರಾಶುಂಪಾಲರು ಕಾರ್ಯಾಕ್ರಮವನ್ನು ನಿರೂಪಿಸಿದರು, ನಂತರ ಶ್ರೀ ಎಂ. ಮಲ್ಲರಾಜ್, ಕಾರ್ಯಕ್ರಮದ ಸಮನ್ವಯಾಧಿಕಾರಿ ಇವರು ವಂದನಾರ್ಪಣೆ ಮಾಡಿದರು.

Back To Top