+91 80 2244 4033 ksccsfltd@gmail.com

Karnataka State Co-Op Credit Societies Federation Ltd.

ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ನಿಯಮಿತ

ದಿನಾಂಕ: 30-11-2019ರಂದು ಬೆಳಗಾವಿಯಲ್ಲಿ ನಡೆದ ಶಿಕ್ಷಣ ತರಬೇತಿ ಕಾರ್ಯಕ್ರಮ

ಸಹಕಾರ ಕ್ಷೇತ್ರಕ್ಕೆ ಆದಾಯ ತೆರಿಗೆ ವಿನಾಯತಿ ಅವಶ್ಯ : ಶ್ರೀ ಬಸವರಾಜ್ ಹಿರೇಮಠ

ಬೆಳಗಾವಿ: ದಿನಾಂಕ 30-11-2019ರಂದು ಮಾಹಾಂತ ಭವನ, ಬೆಳಗಾವಿ ಇಲ್ಲಿ ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳವು ಬೆಳಗಾವಿ ಜಿಲ್ಲೆಯ ಪತ್ತಿನ ಸಹಕಾರ ಸಂಘಗಳ ಆಡಳಿತ ಮಂಡಳಿ ನಿರ್ದೇಶಕರು, ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಒಂದು ದಿನದ ಶೈಕ್ಷಣಿಕ ಕಾರ್ಯಗಾರವನ್ನು ಆಯೋಜಿಸಿತ್ತು.

ಕಾರ್ಯಾಗಾರದ ಅಧ್ಯಕ್ಷತೆಯನ್ನು ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳದ ನಿರ್ದೇಶಕರಾದ ಶ್ರೀ ಶೇಖರಗೌಡ ಮಾಲಿ ಪಾಟೀಲ ರವರು ವಹಿಸಿದ್ದರು. ಪತ್ತಿನ ಸಹಕಾರ ಸಂಘಗಳು ಹೆಚ್ಚು ಕ್ರಿಯಾಶೀಲರಾಗಿ ಮುಂದುವರೆದರೆ ಆರ್ಥಿಕ ಪ್ರಗತಿ ಸಾಧಿಸಲು ಸಾದ್ಯ ಇಲ್ಲವಾದಲ್ಲಿ ಸವಾಲುಗಳನ್ನು ಎದುರಿಸಬೇಕಾಗುತ್ತದೆ ಎಂದರು.

ಈ ಕಾರ್ಯಕ್ರಮವನ್ನು ಶ್ರೀ ಬಸವರಾಜ್ ಹಿರೇಮಠ, ಐ.ಆರ್.ಎಸ್, ಜಂಟಿ ಆಯುಕ್ತರು, ಆದಾಯ ತೆರಿಗೆ ಇಲಾಖೆ, ಗೋವಾ ಪ್ರಾಂತ ರವರು ಕಾರ್ಯಗಾರವನ್ನು ಉಧ್ಘಾಟಿಸಿದರು. ಮಹಾಮಂಡಳವು ಹಮ್ಮಿಕೊಳ್ಳುತ್ತಿರುವ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಗಾರದಲ್ಲಿ ನೆರೆದಿದ್ದ ಸಹಕಾರಿ ಪ್ರತಿನಿಧಿಗಳಿಗೆ ಆದಾಯ ತೆರಿಗೆ ಕಾಯ್ದೆಯಿಂದ ಸಹಕಾರ ವಲಯಕ್ಕೆ ಅನ್ವಯಿಸುವ ಅಂಶಗಳನ್ನು ಹಾಗೂ ಕಾರ್ಯಕ್ರಮದ ಮಹತ್ವವನ್ನು ತಿಳಿಸಿದರು. ಮುಂದುವರೆದು ಮಾತನಾಡಿ ಬದಲಾಗುತ್ತಿರುವ ಇತ್ತೀಚಿನ ಆರ್ಥಿಕ ಪರಿಸ್ಥಿತಿಯಲ್ಲಿ ಆದಾಯ ತೆರಿಗೆ ಇಲಾಖೆಯಿಂದ ಕೈಗೊಳ್ಳುತ್ತಿರುವ ಕ್ರಮಗಳ ಬಗ್ಗೆ ಮತ್ತು ಭಾರತದ ಸರ್ವೊಚ್ಚ ನ್ಯಾಯ್ಯಾಲಯಗಳ ಪ್ರಕರಣದ ತೀರ್ಪುಗಳ ಬಗ್ಗೆ ವಿಮರ್ಷಿಸಿದರು.

ಕಾರ್ಯಗಾರದಲ್ಲಿ ಮುಖ್ಯ ಅಥಿತಿಗಳಾಗಿ ಶ್ರೀ ಜಿ.ಎಂ.ಪಾಟೀಲ್, ಕೆ.ಸಿ.ಎಸ್. ಸಹಕಾರ ಸಂಘಗಳ ಜಂಟಿ ನಿಬಂಧಕರು, ಬೆಳಗಾವಿ ಪ್ರಾಂತ ಮತ್ತು ಮಹಾಮಂಡಳದ ನಿರ್ದೇಶಕರಾದ ಡಾ|| ಸಂಜಯ ಪಂ. ಹೊಸಮಠ, ಶ್ರೀ ತಮ್ಮಣ್ಣ ಬಾಲಪ್ಪ ಕೆಂಚರಡ್ಡಿ, ಶ್ರೀ ಉಮೇಶ ಶಿ. ಬಾಳಿ, ಶ್ರೀ ಎಂ.ಜೆ.ನರೇಂದ್ರ ಕುಮಾರ, ಶ್ರೀ ಧರೇಪ್ಪ ಎಂ. ಅಲಗೂರ, ಶ್ರೀ ಹೆಚ್.ಟಿ.ನಾಗೇಶ್ ಮತ್ತು ಶ್ರೀ ರವೀಂದ್ರ ಪ್ರಲ್ಹಾದ ಕಲಬುರ್ಗಿ ಮತ್ತು ಅಥಿತಿಗಳಾಗಿ ಶ್ರೀ ವರ್ಧಮಾನ ಗು. ಬೋಳಿ, ನಿರ್ದೇಶಕರು, ಜಿಲ್ಲಾ ಸಹಕಾರ ಯೂನಿಯನ್., ಬೆಳಗಾವಿ ಮತ್ತು ಸರಸ್ವತಿ ಕೋ-ಆಪರೇಟಿವ್ ಸೊಸೈಟಿ ಲಿ., ತಿಲಕವಾಡಿ, ಬೆಳಗಾವಿ ಇದರ ನಿರ್ದೇಶಕರಾದ ಶ್ರೀ ಸುರೇಂದ್ರ ಪಾಟ್ನಿಕರ್ ರವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸನ್ನದು ಲೆಕ್ಕಪರಿಶೋಧಕರಾದ ಶ್ರೀ ಬಿ.ವಿ.ರವೀಂದ್ರನಾಥ್, (ಸಿ.ಎ) ಇವರಿಂದ ಆದಾಯ ತೆರಿಗೆ ಮತ್ತು ಜಿ.ಎಸ್.ಟಿ ಕುರಿತು ಹಾಗೂ ಶ್ರೀ ಎಸ್.ಜೆ.ಜೋಷಿ, ಸಹಕಾರ ಸಂಘಗಳ ಸಹಾಯಕ ನಿಬಂಧಕರು (ನಿ.,) ಇವರಿಂದ ಸಹಕಾರ ಸಂಘಗಳಲ್ಲಿ ಸಾಲ ವಸೂಲಾತಿ ಪ್ರಕ್ರಿಯೆ ಹಾಗೂ ಸಂಘಗಳಲ್ಲಿ ಚುನಾವಣಾ ನಿಯಮಾವಳಿಗಳ ಕುರಿತು ತರಬೇತಿ ನೀಡಿದರು. ಈ ಸಂದರ್ಭದಲ್ಲಿ ಮಹಾಮಂಡಳದ ಸಲಹೆಗಾರರಾದ ಶ್ರೀ ಕೆ.ಎಸ್.ಗುರುಪ್ರಸಾದ್ ಮತ್ತು ಪ್ರಭಾರ ಮುಖ್ಯಕಾರ್ಯನಿರ್ವಹಣಾಧಿಕಾರಿಯಾದ ಶ್ರೀಮತಿ ಪಿ. ಆಶಾಲತಾ, ಸರಸ್ವತಿ ಕೋ-ಆಪ್ ಕ್ರೆಡಿಟ್ ಸೊಸೈಟಿಯ ಆಡಳಿತಮಂಡಳಿ ನಿರ್ದೇಶಕರುಗಳು ಮತ್ತು ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.

ಆರಂಭದಲ್ಲಿ ಶ್ರೀ ತಮ್ಮಣ್ಣ ಬಾಲಪ್ಪ ಕೆಂಚರಡ್ಡಿ ರವರು ಗಣ್ಯರನ್ನು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಮಹಾಮಂಡಳದ ನಿರ್ದೇಶಕರಾದ ಶ್ರೀ ಉಮೇಶ ಶಿ. ಬಾಳಿ ರವರು ವಂದನಾರ್ಪಣೆ ಮಾಡಿದರು ಕಾರ್ಯಾಗಾರದಲ್ಲಿ ಸುಮಾರು 350ಕ್ಕು ಹೆಚ್ಚು ಪ್ರತಿನಿಧಿಗಳು ಭಾಗವಹಿಸಿ ಕಾರ್ಯಗಾರದ ಪ್ರಯೋಜನ ಪಡೆದರು.

ಕಾರ್ಯಕ್ರಮದಲ್ಲಿ ಮಹಾಮಂಡಳದ ವತಿಯಿಂದ ಗೋವಾ ಪ್ರಾಂತದ ಆದಾಯ ತೆರಿಗೆ ಜಂಟಿ ಆಯುಕ್ತರಿಗೆ ಸಹಕಾರ ಸಂಸ್ಥೆಗಳನ್ನು ಆದಾಯ ತೆರಿಗೆಯಿಂದ ಮುಕ್ತಿಗೊಳಿಸಲು ಮನವಿ ಸಲ್ಲಿಸಲಾಯಿತು.

Back To Top