+91 80 2244 4033 ksccsfltd@gmail.com

Karnataka State Co-Op Credit Societies Federation Ltd.

ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ನಿಯಮಿತ

Achievements

  1. ಆದಾಯ ತೆರಿಗೆ ಕಾಯ್ದೆ ಕಲಂ.80(ಪಿ) 4ಕ್ಕೆ ತಂದ ತಿದ್ದುಪಡಿ ಕಾಯೆಯಿಂದ 80(ಪಿ)(2)ರಲ್ಲಿ ಇದ್ದ ರಿಯಾಯಿತಿಯು ಮುಂದುವರೆಯುವ ಕುರಿತು ಪತ್ತಿನ ಸಂಘಗಳಿಗೆ ಸೂಕ್ತ ಸಲಹೆ ಮತ್ತು ಮಾರ್ಗದರ್ಶನವನ್ನು ನೀಡಲಾಗಿರುತ್ತದೆ. ಈ ಸಂಬಂಧ ಟ್ರಿಬ್ಯೂನಲ್ ಮತ್ತು ನ್ಯಾಯಾಲಯಗಳಲ್ಲಿ ನೀಡಿರುವ ತೀರ್ಪುಗಳ ಬಗ್ಗೆ ಸಹ ಸಂಘಗಳ ಗಮನಕ್ಕೆ ತಂದು ಸಲಹೆಗಳನ್ನು ನೀಡಲಾಗುತ್ತಿದೆ.
  2. ಸಹಕಾರ ಸಂಘಗಳ ಲೆಕ್ಕಪರಿಶೋಧನೆಗೆ ವಿಧಿಸುವ ಶುಲ್ಕವು ದುಬಾರಿಯಾಗಿದ್ದು ಲೆಕ್ಕಪರಿಶೋಧಕರು, ಸಂಘದ ಲೆಕ್ಕಪರಿಶೋಧನೆಗೆ ಬಳಕೆಯಾಗುವ ಮಾನವ ಸಂಪನ್ಮೂಲದ ದಿನಗಳ ಮೇಲೆ ಅವರಿಗೆ ಲಭ್ಯವಿರುವ ವೇತನ ಮತ್ತು ಇತರೆ ಭತ್ಯೆಗಳನ್ನು ಮಾತ್ರ ಪರಿಗಣಿಸಿ ಲೆಕ್ಕಪರಿಶೋಧನಾ ಶುಲ್ಕ ವಿಧಿಸುವಂತೆಯು ಇಲ್ಲವೆ 5 ಕೋಟಿಗಳಿಗೂ ಮೀರಿದ ವ್ಯವಹಾರವಿರುವ ಕಡೆ ಲೆಕ್ಕಪರಿಶೋಧನೆಯನ್ನು ಚಾರ್ಟೆಡ್ ಅಕೌಂಟೆಂಟ್‍ಗಳಿಗೆ ವಹಿಸಲು ಸರ್ಕಾರವನ್ನು ಆಗ್ರಹಿಸಿದ ಸಂಸ್ಥೆ ಪತ್ತಿನ ಮಹಾಮಂಡಳ. ಅದರ ಫಲವಾಗಿ ಈಗ ಸುಲಭದ ದರದಲ್ಲಿ ಲೆಕ್ಕಪರಿಶೋಧನೆ ಮಾಡಿಸಿಕೊಳ್ಳಲು ಅವಕಾಶ ಬಂದಿರುವುದು ಸ್ವಾಗತಾರ್ಹ
  3.  ಪತ್ತಿನ ಸಹಕಾರ ಸಂಘಗಳು ಸಂಗ್ರಹಿಸುತ್ತಿದ್ದ ಮೂರನೇ ವ್ಯಕ್ತಿಯ ಅಕೌಂಟ್ ಪೇಯಿ ಚೆಕ್ಕುಗಳ ನಗದೀಕರಣಕ್ಕೆ ಭಾರತೀಯ ರಿಸರ್ವ್ ಬ್ಯಾಂಕಿನವರ  ನಿರ್ಬಂದ ಹಾಗೂ ಈ ನಿರ್ಬಂಧದಿಂದ ಹೊರಬರಲು ಇರುವ ಅವಕಾಶ ಹಾಗೂ ಅದರಿಂದ ಆಗುವ ತೊಂದರೆಯನ್ನು ಮಹಾಮಂಡಳ ಮತ್ತು ಪತ್ತಿನ ಸಹಕಾರ ಸಂಘಗಳು ಆರ.ಬಿ.ಐ ಗೆ ಮನವರಿಕೆ ಮಾಡಿದ ಪ್ರಯತ್ನದ ಫಲವಾಗಿ ಮೂರನೇ ವ್ಯಕ್ತಿಗಳ ಚೆಕ್ ಮೊತ್ತ ರೂ.50,000-00ಗಳವರೆಗೆ ನಗದೀಕರಣಕ್ಕೆ ಅನುಮತಿ ನೀಡಿದೆ.
  4.  ಅಖಿಲ ಭಾರತ ಸಹಕಾರ ಸಪ್ತಾಹದ ಆಚರಣೆ:-
    ನವೆಂಬರ್ ಮಾಹೆಯಲ್ಲಿ ಆಚರಿಸುವ ಆಖಿಲ ಭಾರತ ಸಹಕಾರ ಸಪ್ತಾಹದಲ್ಲಿ ಇತರೆ ರಾಜ್ಯಮಟ್ಟದ ಹಾಗೂ ಇತರೆ ಜಿಲ್ಲಾಮಟ್ಟದ ಸಹಕಾರ ಸಂಘಗಳ ನೆರವಿನಿಂದ ಸಮಾರಂಭವನ್ನು ಅದ್ದೂರಿಯಾಗಿ ನಡೆಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ದಿನಾಂಕ:14.11.2014ರಂದು ಮಡಿಕೇರಿಯ ಕುಶಾಲನಗರದಲ್ಲಿ ಸಪ್ತಾಹದ ಆಚರಣೆ ಮಾಡಲಾಗಿದೆ. ಅಂದಿ ಉತ್ತಮ ಸಹಕಾರ ಸಂಘಗಳಿಗೆ ಹಾಗೂ ಶ್ರೇಷ್ಠ ಸಹಕಾರಿಗಳನ್ನು ಗುರ್ತಿಸಿ, ಸನ್ಮಾನ ಮಾಡಿ ಪ್ರಶಸ್ತಿಗಳನ್ನು ನೀಡಲಾಗಿದೆ.
  5.  ದಿನಾಂಕ:14.11.2014ರಂದು ನಡೆದ ಸಹಕಾರ ಸಪ್ತಾಹದಲ್ಲಿ ಸಹಕಾರ ವಾರ್ತಾ ಪತ್ರಿಕೆ ಬಿಡುಗಡೆ ಮಾಡಲಾಗಿದೆ. ಈ ರೀತಿಯಾಗಿ ಪತ್ತಿನ ಸಹಕಾರ ಸಂಘಗಳನ್ನು ಸಂಘಟಿಸಿ ಅವುಗಳ ಅಭಿವೃದ್ದಿಗೆ ಪ್ರೋತ್ಸಾಹಿಸುವುದು ಮತ್ತು ಅವುಗಳ ಕಾರ್ಯವೈಖರಿ ಕುರಿತು ಮಾರ್ಗದರ್ಶನ ನೀಡಿ, ರಾಜ್ಯದಲ್ಲಿ ಮಾದರಿ ಸಂಸ್ಥೆಯಾಗಿ ಕಾರ್ಯನಿರ್ವಹಿಸಬೇಕೆಂಬುದು ಮಹಾಮಂಡಳದ ಪ್ರಮುಖ ಉದ್ದೇಶವಾಗಿರುತ್ತದೆ.

(ಕೆ. ಎಸ್ ಗುರುಪ್ರಸಾದ್ )
                                                              ಮುಖ್ಯಕಾರ್ಯನಿರ್ವಹಣಾಧಿಕಾರಿ

Back To Top