+91 80 2244 4033 ksccsfltd@gmail.com

Karnataka State Co-Op Credit Societies Federation Ltd.

ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ನಿಯಮಿತ

15ನೇ ವಾರ್ಷಿಕ ಸಾಮಾನ್ಯ ಸಭೆ

ಆದಾಯ ತೆರಿಗೆ, ಜಿ.ಎಸ್.ಟಿ ತೆರಿಗೆಗಳ ರದ್ದತಿಗೆ ಶೀಘ್ರವೇ ಕೇಂದ್ರಕ್ಕೆ ಮನವಿ – ಶ್ರೀಮತಿ ಕೆ.ಲಲಿತ ಜಿ.ಟಿ.ದೇವೇಗೌಡ

ದಿನಾಂಕ: 19-09-2019 ರಂದು “ಜ್ಞಾನಜ್ಯೋತಿ” ಸಭಾಂಗಣ, ಬೆಂಗಳೂರು ಸೆಂಟ್ರಲ್ ಯೂನಿವರ್ಸಿಟಿ, ಇಲ್ಲಿ ನಡೆದ ಪತ್ತಿನ ಸಹಕಾರ ಸಂಘಗಳ ಮಹಾಮಂಡಳದ 2018-19ನೇ ಸಾಲಿನ 15ನೇ ವಾರ್ಷಿಕ ಸಾಮಾನ್ಯ ಸಭೆಯು ಮಹಾಮಂಡಳದ ಅಧ್ಯಕ್ಷರಾದ ಶ್ರೀಮತಿ ಕೆ.ಲಲಿತ ಜಿ.ಟಿ.ದೇವೇಗೌಡ ರವರು ಮಹಾಸಭೆಯ ಅಧ್ಯಕ್ಷತೆಯಲ್ಲಿ ನಡೆಯಿತು. ಈ ವೇದಿಕೆಯ ಮೇಲೆ ಮಹಾಮಂಡಳದ ಉಪಾಧ್ಯಕ್ಷರಾದ ಡಾ. ಬಿ.ಡಿ.ಭೂಕಾಂತ ಮತ್ತು ಆಡಳಿತಮಂಡಳಿ ನಿರ್ದೇಶಕರುಗಳಾದ ಶ್ರೀ ಸಿ.ಎಂ.ಮಾರೇಗೌಡ, ಶ್ರೀ ವಿ.ರಾಜು, ಡಾ|| ಸಂಜಯ ಪಂ. ಹೊಸಮಠ, ಶ್ರೀ ಎಂ.ಜೆ.ನರೇಂದ್ರ ಕುಮಾರ, ಶ್ರೀ ಡಿ.ಚನ್ನಯ್ಯ, ಶ್ರೀ ಕೆ.ಕೃಷ್ಣಯ್ಯ, ಶ್ರೀ ಕೆ.ಕೆ.ಮಹೇಂದ್ರಪ್ರಸಾದ್ ಗೌಡ, ಶ್ರೀ ಜಿ.ಮಲ್ಲಿಕಾರ್ಜುನಯ್ಯ, ಶ್ರೀ ತಮ್ಮಣ್ಣ ಬಿ. ಕೆಂಚರಡ್ಡಿ, ಶ್ರೀ ಧರೇಪ್ಪ ಎಂ. ಅಲಗೂರ, ಶ್ರೀ ಗುರುಪಾದಪ್ಪಗೌಡ ಬ. ಪಾಟೀಲ, ಶ್ರೀ ಹೊನ್ನಯ್ಯ ವಿ. ಹಿರೇಮಠ, ಶ್ರೀ ಪಿ.ಕೆ.ಜಯಕೃಷ್ಣೇಗೌಡ, ಶ್ರೀ ಶೇಖರಗೌಡ ಮಾಲಿ ಪಾಟೀಲ, ಶ್ರೀ ಹೆಚ್.ಟಿ.ನಾಗೇಶ್, ಶ್ರೀ ಡಿ.ಆರ್.ನಾಗೇಶಪ್ಪ, ಶ್ರೀ ಉಮೇಶ ಶಿ. ಬಾಳಿ, ಶ್ರೀ ರವೀಂದ್ರ ಪ್ರಲ್ಹಾದ ಕಲಬುರ್ಗಿ, ಶ್ರೀ ಚಿತ್ತರಂಜನ್ ಬೋಳಾರ್ ಮಹಾಮಂಡಳದ ಸಲಹೆಗಾರರಾದ ಶ್ರೀ ಕೆ.ಎಸ್.ಗುರುಪ್ರಸಾದ್ ಪ್ರಭಾರ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಪಿ.ಆಶಾಲತಾ ರವರುಗಳು ಉಪಸ್ಥಿತರಿದ್ದರು.

ಮಹಾಮಂಡಳದ ಅಧ್ಯಕ್ಷರಾದ ಶ್ರೀಮತಿ ಕೆ.ಲಲಿತ ಜಿ.ಟಿ.ದೇವೇಗೌಡ ರವರು ಮಹಾಸಭೆಯನ್ನು ಉದ್ದೇಶಿಸಿ ಮಾತನಾಡಿ ಪತ್ತಿನ ಸಹಕಾರ ಸಂಘಗಳ ಮಹಾಮಂಡಳದ ಕಾರ್ಯಚಟುವಟಿಕೆಗಳ ಬಗ್ಗೆ ಹರ್ಷ ವ್ಯಕ್ತಪಡಿಸಿ ಪತ್ತಿನ ಸಹಕಾರ ಸಂಘಗಳಿಗೆ ಕೇಂದ್ರ ಸರ್ಕಾರವು ಆದಾಯ ತೆರಿಗೆ ಮತ್ತು ಜಿ.ಎಸ್.ಟಿ ತೆರಿಗೆಗಳನ್ನು ವಿಧಿಸುತ್ತಿದ್ದು ಇದರಿಂದ ಸಂಘಗಳು ತೀವ್ರ ತೊಂದರೆ ಅನುಭವಿಸುತ್ತಿದ್ದು, ಈ ಬಗ್ಗೆ ಮುಂದಿನ ದಿನದಲ್ಲಿ ಮಹಾಮಂಡಳದ ವತಿಯಿಂದ ಕೇಂದ್ರ ಸರ್ಕಾರದ ಆರ್ಥಿಕ ಸಚಿವರನ್ನು ಹಾಗೂ ಸಂಬಂಧಪಟ್ಟ ಇಲಾಖೆಗೆ ಮನವರಿಕೆ ಮಾಡಿಕೊಡಲು ಶೀಘ್ರವೇ ನಿಯೋಗದೊಂದಿಗೆ ಭೇಟಿ ಮಾಡಲಾಗುವುದು ಎಂದು ತಿಳಿಸಿದರು. ಮುಂದುವರೆದು ಮಹಾಮಂಡಳವು ಖರೀದಿಸಿರುವ ನಿವೇಶನದಲ್ಲಿ ಕಟ್ಟಡ ನಿರ್ಮಾಣ ಮಾಡುವುದಕ್ಕೆ ಕಟ್ಟಡ ನಿಧಿ ಸಂಗ್ರಹ ಮಾಡಲು ತೀರ್ಮಾನಿಸಲಾಗಿದ್ದು ಸದಸ್ಯ ಸಹಕಾರ ಸಂಘಗಳು ದೇಣಿಗೆ ನೀಡುವಂತೆ ಅವರು ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಹಾಮಂಡಳದ ಸದಸ್ಯ ಸಹಕಾರ ಸಂಘಗಳಿಗೆ 2018-19ನೇ ಸಾಲಿನಲ್ಲಿ ಜಿಲ್ಲಾವಾರು ಇ-ಸ್ಟಾಂಪಿಂಗ್ ವಿಭಾಗದಲ್ಲಿ ಹೆಚ್ಚು “ಇ-ಸ್ಟಾಂಪಿಂಗ್ ಪ್ರತಿಗಳು” ಮತ್ತು ಹೆಚ್ಚು “ಇ-ಸ್ಟಾಂಪಿಂಗ್ ಮುದ್ರಾಂಕ ಶುಲ್ಕ” ಗಳನ್ನು ಮುದ್ರಿಸಿರುವ ಸಹಕಾರ ಸಂಘಗಳ ಪ್ರತಿನಿಧಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

Back To Top