+91 80 2244 4033 ksccsfltd@gmail.com

Karnataka State Co-Op Credit Societies Federation Ltd.

ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ನಿಯಮಿತ

ಮಹಾಮಂಡಳದಿಂದ ಬೆಳಗಾವಿಯಲ್ಲಿ ಆದಾಯ ತೆರಿಗೆ ರದ್ದತಿ ಕೋರಿ – ಮನವಿ ಸಲ್ಲಿಕೆ ಹಾಗೂ ಪ್ರತಿಭಟನೆ

ಪತ್ತಿನ ಸಹಕಾರ ಸಂಘಗಳು ಆದಾಯ ತೆರಿಗೆಯಿಂದ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಪತ್ತಿನ ಮಹಾಮಂಡಳದಿಂದ ಪ್ರತಿಭಟನೆ – ಮನವಿ ಸಲ್ಲಿಕೆ

ಬೆಳಗಾವಿ: ದಿನಾಂಕ 17-12-2019ರಂದು ಬೆಳಗಾವಿಯಲ್ಲಿ ಪತ್ತಿನ ಸಹಕಾರ ಸಂಘಗಳ ಮಹಾಮಂಡಳದ ವತಿಯಿಂದ ಆದಾಯ ತೆರಿಗೆ ಇಲಾಖೆಯಿಂದ ಎದುರುಸುತ್ತಿರುವ ಸಮಸ್ಯೆಗಳ ಬಗ್ಗೆ ಒಂದು ದಿನದ ಪ್ರತಿಭಟನೆಯನ್ನು ಸಹಕಾರಿ ಮುಖಂಡರುಗಳಾದ ಡಾ|| ಸಂಜಯ ಪಂ. ಹೊಸಮಠ, ಶ್ರೀ ತಮ್ಮಣ್ಣ ಬಾಲಪ್ಪ ಕೆಂಚರಡ್ಡಿ ಮತ್ತು ಶ್ರೀ ಉಮೇಶ ಶಿ. ಬಾಳಿ ಇವರುಗಳ ನೇತೃತ್ವದಲ್ಲಿ ನಡೆಸಲಾಯಿತು.

ಸುಮಾರು 700ಕ್ಕು ಹೆಚ್ಚು ಮಂದಿ ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಮೊದಲಿಗೆ ಕೇಂದ್ರ ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲ ಸೀತಾರಮನ್ ರವರಿಗೆ ಮಹಾಮಂಡಳದ ಪರವಾಗಿ ಮನವಿ ಪತ್ರವನ್ನು ಬೆಳಗಾವಿ ಜಿಲ್ಲೆಯ ಜಿಲ್ಲಾ ಅಪರ ಜಿಲ್ಲಾಧಿಕಾರಿಗಳ ಮೂಲಕ ಮೆರವಣಿಗೆಯಲ್ಲಿ ತೆರಳಿ ಮನವಿ ಸಲ್ಲಿಸಲಾಯಿತು.

ಆನಂತರ ಆದಾಯ ತೆರಿಗೆ ಇಲಾಖೆಯ ಜಂಟಿ ಆಯುಕ್ತರಾದ ಶ್ರೀಮತಿ ರಾಜೇಶ್ವರಿ ಮೆನನ್. ರವರರಿಗೆ ಸಲ್ಲಿಸಿ ಪತ್ತಿನ ಸಹಕಾರ ಸಂಘಗಳು ಆದಾಯ ತೆರಿಗೆ ಇಲಾಖೆಯಿಂದ ಎದುರುಸುತ್ತಿರುವ ಸಮಸ್ಯೆಗಳನ್ನು ನಿರ್ದೇಶಕರುಗಳು ಮನದಟ್ಟು ಮಾಡಿಕೊಟ್ಟರು.

ಆದಾಯ ಇಲಾಖೆಯ ಜಂಟಿ ಆಯುಕ್ತರು ಈ ಬಗ್ಗೆ ಪರಿಶೀಲಿಸಿ ಕ್ರಮವಿಡವುದಾಗಿ ಭರವಸೆ ನೀಡಿದರು ಅವರಿಗೆ ಸಲ್ಲಿಸಿದ ಮನವಿ ಪತ್ರವನ್ನು ಕೇಂದ್ರ ಹಣಕಾಸು ಸಚಿವರಿಗೆ ಸಲ್ಲಿಸುವುದಾಗಿ ತಿಳಿಸಿದರು.

ಅನಂತರ, ಬೆಳಗಾವಿಯ ಚನ್ನಮ್ಮ ವೃತ್ತದ ಕನ್ನಡ ಸಾಹಿತ್ಯ ಭವನದಲ್ಲಿ ಪತ್ತಿನ ಸಹಕಾರ ಸಂಘಗಳ ಪ್ರತಿನಿಧಿಗಳ ಸಭೆಯನ್ನು ನಡೆಸಲಾಯಿತು ಮಹಾಮಂಡಳದ ನಿರ್ದೇಶಕರಾದ ಶ್ರೀ ಉಮೇಶ ಶಿ. ಬಾಳಿ ರವರು ಮಾತನಾಡಿ ಮಹಾಮಂಡಳವು ಪತ್ತಿನ ಸಹಕಾರ ಸಂಘಗಳು ಎದುರುಸುತ್ತಿರುವ ಸಮಸ್ಯೆಗಳ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು.

ಡಾ|| ಸಂಜಯ ಪಂ. ಹೊಸಮಠ ರವರು ಮಾತನಾಡಿ ಪತ್ತಿನ ಮಹಾಮಂಡಳವು ಪ್ರಾರಂಭದಿಂದ ಈ ಸಮಸ್ಯೆಗಳ ಪರಿಹಾರಕ್ಕೆ ಕೈಗೊಂಡ ಕ್ರಮಗಳ ಬಗ್ಗೆ ಸಭೆಯಲ್ಲಿ ಹಾಜರಿದ್ದ ಸಹಕಾರ ಸಂಘಗಳ ಪ್ರತಿನಿಧಿಗಳಿಗೆ ಮನವರಿಕೆ ಮಾಡಿದರು.

ಸಭೆಯಲ್ಲಿ 500ಕ್ಕು ಹೆಚ್ಚು ಸಹಕಾರ ಸಂಘಗಳ ಪ್ರತಿನಿಧಿಗಳು ಹಾಜರಿದ್ದರು. ಸಭೆ ಮುಗಿದ ನಂತರ ಪತ್ತಿನ ಸಹಕಾರ ಸಂಘಗಳ ಪ್ರತಿನಿಧಿಗಳ ನಿಯೋಗವು ರಾಜ್ಯ ಸಭಾ ಸದಸ್ಯರಾದ ಡಾ|| ವಿ. ಪ್ರಭಾಕರ ಕೋರೆ ರವರನ್ನು ಭೇಟಿ ಮಾಡಿ

ಪತ್ತಿನ ಸಹಕಾರ ಸಂಘಗಳು ಎದುರುಸುತ್ತಿರುವ ಆದಾಯ ತೆರಿಗೆ ಸಮಸ್ಯೆಗಳ ಬಗ್ಗೆ ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲ ಸೀತಾರಾಮನ್ ಹಾಗೂ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ರವರ ಗಮನಕ್ಕೆ ತಂದು ಈ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಕೋರಿದರು. ಸಂಸದರಾದ ಡಾ. ಪ್ರಭಾಕರ ಕೋರೆ ಅವರು ಈ ಬಗ್ಗೆ ಸಮಸ್ಯೆಗಳನ್ನು ಕೇಂದ್ರ ಹಣಕಾಸು ಸಚಿವರಿಗೆ ಮತ್ತು ಪ್ರಧಾನ ಮಂತ್ರಿಗಳ ಗಮನಕ್ಕೆ ತಂದು ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿದರು.

Back To Top