+91 80 2244 4033 ksccsfltd@gmail.com

Karnataka State Co-Op Credit Societies Federation Ltd.

ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ನಿಯಮಿತ

ದಿನಾಂಕ: 11.10.2017 ರಂದು ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಗೊಳಪಡುವ ಪತ್ತಿನ ಸಹಕಾರ ಸಂಘಗಳ ಸಿಬ್ಬಂದಿಗಳಿಗೆ ನಡೆದ ಒಂದು ದಿನದ ಶೈಕ್ಷಣಿಕ ಕಾರ್ಯಾಗಾರ

ದಿನಾಂಕ: 11.10.2017 ನೇ ಬುಧವಾರ ದಂದು ಕೇಶವ ಸ್ಮೃತಿ ಭವನ, ಮಾರ್ಕೆಟ್ ರಸ್ತೆ, ಚಿಕ್ಕೋಡಿ ಇಲ್ಲಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಗೊಳಪಡುವ ಪತ್ತಿನ ಸಹಕಾರ ಸಂಘಗಳ ಆಡಳಿತಮಂಡಳಿ ಸದಸ್ಯರು, ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಒಂದು ದಿನದ ಶೈಕ್ಷಣಿಕ ಕಾರ್ಯಗಾರವನ್ನು ಏರ್ಪಡಿಸಲಾಗಿತ್ತು.

ಶ್ರೀ ಎಂ.ಡಿ.ಮಲ್ಲೂರು, ಕೆ.ಸಿ.ಎಸ್ ಸಹಕಾರ ಸಂಘಗಳ ಜಂಟಿ ನಿಬಂಧಕರು, ಬೆಳಗಾವಿ ಪ್ರಾಂತ ರವರು ಕಾರ್ಯಾಗಾರದ ಉದ್ಘಾಟನೆ ಮಾಡಿ ತರಬೇತಿಯ ಅಗತ್ಯತೆಯನ್ನು ಹಾಜರಿದ್ದ ಪದಾಧಿಕಾರಿಗಳು ಮತ್ತು ಮುಖ್ಯಕಾರ್ಯನಿರ್ವಹಣಾಧಿಕಾರಿಗಳಿಗೆ ಮನದಟ್ಟು ಮಾಡಿಕೊಟ್ಟರರು. ಕಾರ್ಯಾಗಾರದ ಅಧ್ಯಕ್ಷತೆಯನ್ನು ಮಹಾಮಂಡಳದ ಅಧ್ಯಕ್ಷರಾದ ಶ್ರೀ ಸಿ.ಎಂ ಮಾರೇಗೌಡ ರವರು ವಹಿಸಿದ್ದರು ಮುಖ್ಯ ಅತಿಥಿಗಳಾಗಿ ಡಾ|| ಸಂಜಯ್ ಪಿ. ಹೊಸಮಠ, ಉಪಾಧ್ಯಕ್ಷರು, ಶ್ರೀ ಗುರುರಾಜ್ ಹುಣಸಿಮರದ, ನಿರ್ದೇಶಕರು, ಶ್ರೀ ಎಂ.ಜೆ. ನರೇಂದ್ರಕುಮಾರ, ನಿರ್ದೇಶಕರು, ಶ್ರೀ ತಮ್ಮಣ್ಣ ಬಾಲಪ್ಪ ಕೆಂಚರಡ್ಡಿ, ನಿರ್ದೇಶಕರು ಮತ್ತು ಶ್ರಿ ಧರೇಪ್ಪ ಎಂ. ಅಲಗೂರ, ನಿರ್ದೇಶಕರು, ಹಾಗೂ ಅತಿಥಿಗಳಾಗಿ ಶ್ರೀ ಎಂ.ಬಿ.ಪೂಜಾರ, ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಚಿಕ್ಕೋಡಿ ಉಪವಿಭಾಗ ಹಾಗೂ ವಿಶೇಷ ಆಹ್ವಾನಿತರಾಗಿ ಶ್ರೀ ತಾತ್ಯಾ ಸಹೇಬ್ ರಾಜಗೊಂಡ ಪಾಟೀಲ್, ಅಧ್ಯಕ್ಷರು, ದಿ ಬೋರಗಾಂವ ಅರ್ಬನ್ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿ ಲಿ., ಬೋರಗಾಂವ, ಚಿಕ್ಕೋಡಿ ತಾಲ್ಲೂಕು, ಶ್ರೀ ರಾಜನ ಗೌಡ ರಾವ್ ಸಾಹೇಬ್ ಪಾಟೀಲ್, ಅಧ್ಯಕ್ಷರು, ಶ್ರೀ ವಿಶ್ವಗುರು ಮಲ್ಟಿಪರ್ಪಸ್ ಕೋ-ಅಪರೇಟಿವ್ ಸೊಸೈಟಿ ಲಿ., ಚಿಕ್ಕೋಡಿ ರವರು ಭಾಗವಹಿಸಿದ್ದರು, ಶ್ರೀ ತಮ್ಮಣ್ಣ ಬಿ. ಕೆಂಚರಡ್ಡಿ ರವರು ಗಣ್ಯರನ್ನು ಸ್ವಾಗತಿಸಿ ನಂತರ ವಂದಿಸಿದರು.
ಈ ಶೈಕ್ಷಣಿಕ ತರಬೇತಿ ಕಾರ್ಯಾಗಾರದಲ್ಲಿ ಶ್ರೀ ಬಿ.ವಿ ರವೀಂದ್ರನಾಥ., ಸನ್ನದು ಲೆಕ್ಕಪರಿಶೋಧಕರು, ಸಾಗರ ಇವರು “ಆದಾಯ ತೆರಿಗೆ ಮತ್ತು ಸರಕು ಸೇವಾ ತೆರಿಗೆಯ (ಜಿ.ಎಸ್.ಟಿ) ಪ್ರಮುಖ ಅಂಶಗಳ” ಕುರಿತು ಉಪನ್ಯಾಸ ನೀಡಿದರು ಮಧ್ಯಾಹ್ನದ ಅವದಿಯಲ್ಲಿ ಇ-ಸ್ಟಾಂಪಿಂಗ್ ತಜ್ಞರಿಂದ “ಇ-ಸ್ಟಾಂಪಿಂಗ್ ಕುರಿತು ತರಬೇತಿ” ಹಾಗೂ ಶ್ರೀ ಸುರೇಶ್ ಗಂಗಾಧರರಾವ್ ಜೋಷಿ, ಸಹಕಾರ ಸಂಘಗಳ ಸಹಾಯಕ ನಿಬಂಧಕರು (ನಿವೃತ್ತ) ಇವರಿಂದ “ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ ಹಾಗೂ ನಿಯಮಗಳಲ್ಲಿನ ಇತ್ತೀಚಿನ ತಿದ್ದುಪಡಿಗಳು ಮತ್ತು ದ್ರವ್ಯ ಆಸ್ತಿ ನಿರ್ವಹಣೆ” ಕುರಿತು ಉಪನ್ಯಾಸ ನೀಡಿದರು.

ಸದರಿ ಕಾರ್ಯಾಗಾರಕ್ಕೆ ಮಹಾಮಂಡಳದಲ್ಲಿ ಸದಸ್ಯತ್ವ ಪಡೆದಿರುವ 220 ಪ್ರತಿನಿಧಿಗಳು ನೋಂದಣಿಯಾಗದಿರುವ ಸಂಘಗಳಿಂದ 118 ಪ್ರತಿನಿಧಿಗಳು ಸೇರಿ ಈ ಕಾರ್ಯಾಗಾರದಲ್ಲಿ ಅಂದಾಜು 338 ಪ್ರತಿನಿಧಿಗಳು ಹಾಜರಿದ್ದು ಹಾಜರಿದ್ದ ಎಲ್ಲಾ ಪ್ರತಿನಿಧಿಗಳಿಗೆ ಮಹಾಮಂಡಳದ ವತಿಯಿಂದ ತರಬೇತಿ ಕಿಟ್ಟನ್ನು ನೀಡಲಾಯಿತು. ಒಟ್ಟಾರೆ ಕಾರ್ಯಾಗಾರವನ್ನು ಅತ್ಯಂತ ಯಶಸ್ವಿಯಾಗಿ ನಡೆಸಲಾಯಿತು. ಈ ತರಬೇತಿ ಕಾರ್ಯಾಗಾರದ ಬಗ್ಗೆ ಭಾಗವಹಿಸಿದ್ದ ಪ್ರತಿನಿಧಿಗಳು ಮೆಚ್ಚಿಗೆ ವ್ಯಕ್ತಪಡಿಸಿದರು.

 

Back To Top